Saturday 10 May 2014

ಓ ನೀಲಾಕಾಶದ ಕಾರ್ಮುಗಿಲೇ, ನಾ ಬರುವೆನು ನಿನ್ನಯ ತೇರಿನಲೇ... (ಭಾವಾನುವಾದ)

ಹಿಂದಿಯ ಮೂಲ ಗೀತೆಯ ಧಾಟಿಯಲ್ಲೇ (tune) ಸಾಗುವ ಕನ್ನಡದ ಭಾವಾನುವಾದ. ಉತ್ತಮ ಪರ್ಯಾಯಗಳು ದೊರೆತರೆ ಕನ್ನಡ ಭಾವಾನುವಾದ ಮತ್ತೂ ಬದಲಾಗಬಹುದು.

ಚಿತ್ರ: ಛಾಯಾ (1961)
ಸಾಹಿತ್ಯ: ರಾಜೇಂದ್ರ ಕೃಷ್ಣ  
ಸಂಗೀತ: ಸಲೀಲ್ ಚೌಧುರಿ (ಮೋಝಾ಼ರ್ಟ್ ಸಿಂಫನಿ 40 ಪ್ರೇರಿತ)
ಗಾಯಕರು: ತಲತ್ ಮೆಹಮೂದ್, ಲತಾ ಮಂಗೇಶ್ಕರ್
ಚಿತ್ರಿಕೆಯಲ್ಲಿ: ಸುನಿಲ್ ದತ್, ಆಶಾ ಪಾರೇಖ್

ಮೂಲಗೀತೆಯ ಇಳಿಕೊಂಡಿ(Download Link)

ಕನ್ನಡ ಭಾವಾನುವಾದಹಿಂದಿ ಮೂಲ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು.ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಈ ಪರಿ  ಎನ್ನ ನೀ ಬಯಸದಿರು,ಇತನಾ ನಾ ಮುಝ ಸೇ ತೂ ಪ್ಯಾರ್ ಬಢ಼ಾ, 

ಒಂದೆಡೆ ನಾನು ವಿರಮಿಸೆನು,ಮುಝೇ ಏಕ್ ಜಗಹ್ ಆರಾಮ್ ನಹೀಂ, 
ನಾ ನಿಲ್ಲದೆ ಓಡುವ ಹಠಮಾರಿ.ರುಕ್ ಜಾನಾ ಮೇರಾ ಕಾಮ್ ನಹೀಂ

ಎಲ್ಲಿಯವರೆವಿಗೂ ಬರುವೆಯೋ ನೀ,ಮೇರಾ ಸಾಥ್ ಕಹಾ ತಕ್ ದೋಗೀ ತುಮ್
ನಾ ದೇಶ ವಿದೇಶದ ಅಲೆಮಾರಿ.ಮೈಂ ದೇಸ್ ಬಿದೇಸ್ ಕಾ ಬಂಜಾರಾ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು.ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಓ ನೀಲಾಕಾಶದ ಕಾರ್ಮುಗಿಲೇ,ಓ ನೀಲ್ ಗಗನ್ ಕೇ ದೀವಾನೇ, 
ನೀನರಿಯೆ ನನ್ನಯ ಪ್ರೇಮವನು.ತೂ ಪ್ಯಾರ್ ನಾ ಮೇರಾ ಪಹಚಾನೇ

ನಾ ಬರುವೆನು ನಿನ್ನಯ ತೇರಿನಲೇ,ಮೈಂ ತಬ್ ತಕ್ ಸಾಥ್ ಚಲೂ ತೇರೇ,
ನೀ ಸೋತು ಮಳೆಗರಿಯೊವರೆಗೂ.ಜಬ್ ತಕ್ ನಾ ಕಹೇ ತೂ ಮೈಂ ಹಾರಾ
ಬಯಸುವೆ ನಿನ್ನನ್ನೇ ಎಂದೆಂದೂ,ಇಸಲಿಯೇ ತುಝ್ ಸೇ ಮೈಂ ಪ್ಯಾರ್ ಕರೂ, 
ನೀ ನಿಲ್ಲದ ಚಂಚಲ ಮುಗಿಲೆಂದು,ಕೇ ತೂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ
ಈ ಪರಿ  ಎನ್ನ ನೀ ಬಯಸದಿರು,ಇತನಾ ನಾ ಮುಝ್ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಯಾರಿಗೂ ಆಸರೆ ನೀಡೆನು ನಾ,ಕೈಸೇ ಕಿಸೀ ಕಾ ಸಹಾರಾ ಬನೂ, 
ನೆಲೆಸಲು ನನಗೇ ತಾವಿಲ್ಲಾ…ಕೇ ಮೈಂ ಖುದ್ ಬೇಘರ್ ಬೇಚಾರಾ
ಪ್ರೇಮದಿ ಮುಗುದೆ ನೀ ಆಗದಿರು,ಕ್ಯೋಂ ಪ್ಯಾರ್ ಮೇಂ ತೂ ನಾದಾನ್ ಬನೇ,
ತಿರುಕನ ಜೊತೆಯಲಿ ತಿರುಗದಿರು.ಏಕ್ ಪಾಗಲ್ ಕಾ ಅರಮಾನ್ ಬನೇ

ಹಿಂದಿರುಗುವುದನು ಮರೆತಿರುವೆಅಬ್ ಲೌಟ್ ಕೇ ಜಾನಾ ಮುಶ್ಕಿಲ್ ಹೈಂ, 
ಜಗವನೆ ಬಿಟ್ಟು ನಾ ಬಂದಿರುವೆ,ಮೈನೇ ಛೋಡ಼್ ದಿಯಾ ಹೈಂ ಜಗ್ ಸಾರಾ
ಈ ಪರಿ ಎನ್ನ ನೀ ಬಯಸದಿರು,ಇತನಾ ನಾ ಮುಝ ಸೇ ತೂ ಪ್ಯಾರ್ ಬಢ಼ಾ, 
ನಾ ನಿಲ್ಲದ ಚಂಚಲ ಕಾರ್ಮುಗಿಲು.ಕೇ ಮೈಂ ಏಕ್ ಬಾದಲ್ ಆವಾರಾ
ಪ್ರತಿ ಜನುಮದಲೂ ಜೊತೆಯಿರುವೆ,ಜನಮ್ ಜನಮ್ ಸೇ ಹೂಂ ಸಾಥ್ ತೇರೇ, 
ನನ್ನಯ ಹೆಸರದು ನೀರ ತೊರೆ.ಹೈಂ ನಾಮ್ ಮೇರಾ ಜಲ್ ಕೀ ಧಾರಾ

ಹಿಂದಿ ಗೀತಚಿತ್ರ

 ಮೋಝಾ಼ರ್ಟ್ ಸಿಂಫನಿ 40

No comments:

Post a Comment